Wed Oct 02 18:33:28 UTC 2024: ## ಸಮಂತಾ-ನಾಗಚೈತನ್ಯ ವಿಚ್ಛೇದನ: ಕೊಂಡಾ ಸುರೇಖಾ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ

ನವದೆಹಲಿ: ಟಾಲಿವುಡ್ ನಟ ನಾಗಚೈತನ್ಯ ಮತ್ತು ಸಮಂತಾ (Samantha Ruth Prabhu) ದಾಂಪತ್ಯ ಮುರಿದುಬೀಳಲು ಬಿಆರ್‌ಎಸ್ ಮುಖಂಡ ಕೆಟಿಆರ್ ಅವರೇ ಕಾರಣ ಎಂದು ಸಚಿವೆ ಕೊಂಡಾ ಸುರೇಖಾ ಸ್ಫೋಟಕ ಆರೋಪ ಮಾಡಿದ್ದಾರೆ. ಕೆಟಿಆರ್ ಬಳಿ ಹೋಗ್ಲಿಲ್ಲ ಅಂದ್ರೆ ಮನೆಯಲ್ಲಿ ಇರುವಂತಿಲ್ಲ ಎಂದು ಸಮಂತಾಗೆ ನಟ ನಾಗಾರ್ಜುನ ಬೆದರಿಕೆ ಹಾಕಿದ್ರೂ ಅಂತಾನೂ ಆಪಾದಿಸಿದ್ದಾರೆ.

ಸಚಿವೆ ಕೊಂಡಾ ಸುರೇಖಾ ಹೇಳಿಕೆಯನ್ನು ಖಂಡಿತಿದ್ದೇನೆ ಎಂದು ನಟ ನಾಗಾರ್ಜುನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿ ಪ್ರಮುಖರನ್ನು ರಾಜಕೀಯ ಟೀಕೆಗಳಿಗೆ ಬಳಸಿಕೊಳ್ಳಬೇಡಿ ಮತ್ತು ಇತರರ ವೈಯಕ್ತಿಕ ವಿಷಯಗಳನ್ನು ಗೌರವಿಸಿ ಎಂದು ಅವರು ಮನವಿ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಮಾಡಿರುವ ಆರೋಪಗಳು ಸಂಪೂರ್ಣ ಅಸಂಬದ್ಧ. ಸುಳ್ಳಿನಿಂದ ಕೂಡಿವೆ. ನಿಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೊಂಡಾ ಸುರೇಖಾ ಹೇಳಿಕೆಗೆ ನಟಿ ಸಮಂತಾ ರುತ್‌ ಪ್ರಭು ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಬ್ಬರ ವೈಯಕ್ತಿಕ ವಿಚಾರಗಳನ್ನು ಗೌರವಿಸಿ, ರಾಜಕೀಯ ಜಗಳಗಳಿಂದ ನನ್ನ ಹೆಸರನ್ನು ದೂರವಿಡಿ ಎಂದು ಅವರು ಹೇಳಿದ್ದಾರೆ.

Read More