Fri Oct 11 21:22:34 UTC 2024: ## ಬಿಂದಾಸ್ ಬಾಲಿವುಡ್ ನೈಟ್ಸ್: ಮೈಸೂರಿನ ಜನತೆ ‘ಬಾದ್‌ಷಾ’ ತಾಳಕ್ಕೆ ಕುಣಿದರು

**ಮೈಸೂರು:** ಯುವ ದಸರಾದ ಮೂರನೇ ದಿನವಾದ ಮಂಗಳವಾರ ರಾತ್ರಿ, ಬಿಂದಾಸ್‌ ಬಾಲಿವುಡ್‌ ನೈಟ್ಸ್‌ನಲ್ಲಿ ‘ಬಾದ್‌ಷಾ’ ತಾಳಕ್ಕೆ ಮೈಸೂರಿನ ಜನತೆ ಹುಚ್ಚೆದ್ದು ಕುಣಿದರು. ಖ್ಯಾತ ಗಾಯಕ ಆದಿತ್ಯ ಪ್ರತೀಕ್‌ ಸಿಂಗ್‌ ಅಲಿಯಾಸ್ ʼಬಾದ್ ಷಾʼ ಅವರು ತಮ್ಮ ರ‍್ಯಾಪ್‌ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದರು.

‘ಹೇ ಲಡ್ಕಿ ಬ್ಯೂಟಿ ಫುಲ್ ಗರ್ಕೆ ಚುಲ್ʻ, ʻಮೇ.ಪಾನಿ ಪಾನಿ ಹೋಗಾಯಿ ʻಇಕು ಹೋಗಯ್ ಹಮಾ ಹಮಾʼ ಮುಂತಾದ ತಮ್ಮ ಆಲ್ಬಮ್‌ ಗೀತೆಗಳನ್ನು ಪ್ರಸ್ತುತಪಡಿಸಿದ ಬಾದ್‌ಷಾ ಅವರನ್ನು ಪ್ರೇಕ್ಷಕರು ಹಾಡುತ್ತಾ, ಕುಣಿಯುತ್ತ ಬೆಂಬಲಿಸಿದರು. “ನಾನು ಗಾಯಕನಲ್ಲ, ನಾನೊಬ್ಬ ಬರಹಗಾರ” ಎಂದು ಕನ್ನಡದಲ್ಲಿ ಮಾತನಾಡಿದ ಅವರು, ತಮ್ಮ ಭಾವನೆಯನ್ನು ಬರೆದು ಹಾಡುತ್ತೇನೆ ಎಂದು ಹೇಳುವ ಮೂಲಕ ಕನ್ನಡಿಗರ ಮನಗೆದ್ದರು. ಪುನೀತ್ ರಾಜ್ ಕುಮಾರ್ ಅವರ ನೀನೇ ರಾಜ ಕುಮಾರ ಗೀತೆಯ ಮೂಲಕ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಮರ್ಪಿಸಿದರು.

ಇದಕ್ಕೂ ಮುನ್ನ, ಯುವ ಗಾಯಕ ಸರಿಗಮಪ ಖ್ಯಾತಿಯ ಜಸ್ ಕರಣ್ ಸಿಂಗ್ ಕನ್ನಡದ ಗೀತೆಗಳನ್ನು ಹಾಡಿ ಮಾಧುರ್ಯ ಹೆಚ್ಚಿಸಿದರು. ʻಮರುಭೂಮಿ ನಡುವೆʼ, ʼಜಗವೇ ನೀನು ಗೆಳತಿಯೇʼ, ʻನೆನ್ನೆ ತನಕ ತಿಳಿಯದು ಪ್ರೇಮದ ದಾರಿʼ, ಕನ್ನಡ ಚಲಚಿತ್ರರಂಗದ ಗಣೇಶ್ ಅವರ ʻದ್ವಾಪರ ದಾಟುತ ನಿನ್ನನೆ ನೋಡಲು ಬಂದ ರಾಧಿಕೇʼ ಎಂಬ ಗೀತೆಗಳ ಮೂಲಕ ಮೈಸೂರಿಗರನ್ನು ದ್ವಾಪರಕ್ಕೆ ಕರೆದೊಯ್ದರು.

ಮೈಸೂರಿನ ಹಿನ್ನೆಲೆ ಗಾಯಕಿ ಸಂಗೀತ ರವೀಂದ್ರನಾಥ್ ಅವರ ಮಸಾಲೆ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು. ಬೆಳಕಿನ ಕವಿತೆ ಬೆಳಗಿಗೆ ಸೋತೆ ಎಂದು ಹಾಡುತ್ತಾ ಯುವ ಸಮೂಹ ಮನದಲ್ಲಿ ಪ್ರೇಮದ ಪುಳಕವನ್ನು ಹೆಚ್ಚಿಸಿದರು.

ತಾಯಿಗೆ ತಕ್ಕ ಮಗ, ಕಿರಿಕ್ ಪಾರ್ಟಿ, ರಾಬರ್ಟ್, ರನ್ನ, ಶರಣ, ಖುಷಿ, ಅಣ್ಣಾಬಾಂಡ್, ಆಕಸ್ಮಿಕ ಚಿತ್ರಗಳ ಹಾಡುಗಳ ಮೂಲಕ ಮೈಸೂರು ಯುವ ಜನತೆಯನ್ನು ಕುಣಿದು ಕುಪ್ಪಲಿಸುವಂತೆ ಮಾಡಿದರು.

Read More